ಟಾರ್ಗೆಟ್ ಗ್ರೂಪ್
- ಸುರಭಿ ವೃದ್ಧಾಶ್ರಮ ಸಮಾಜದಲ್ಲಿ ನೊಂದ ಮಕ್ಕಳಿಂದ ದೂರವಾದ ಮತ್ತು ಕುಂಟುಂಬದಲ್ಲಿ ಮಕ್ಕಳ ನಿರ್ಲಕ್ಷಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಆಶ್ರಯ ನೀಡುವುದರ ಜೊತೆಗೆ ಧಾಖಲಾದ ಪ್ರತಿಯೊಬ್ಬ ವೃದ್ಧರನ್ನು ಪ್ರೀತಿಯಿಂದ ಸಹನೆಯಿಂದ ಭಾವಪೂರ್ಣವಾದ ಆರೈಕೆಯ ಮೂಲಕ ಅವರ ಕುಟುಂಬ ಸದಸ್ಯರ ಹಾಗೂ ಮಕ್ಕಳ ನೆನಪು ಬಾರದಂತೆ ಅವರ ಅವಶ್ಯಕತೆಗಳನ್ನು ಈಡೇರಿಸಬಹುದಾಗಿದೆ.
- ಹಿರಿಯ ನಾಗರಿಕರ ಹಾಗೂ ವೃದ್ಧರ ಆರೋಗ್ಯದ ಬಗ್ಗೆ ವೃದ್ಧಾಶ್ರಮಗಳು ಕಾರ್ಯತಂತ್ರ ಮತ್ತು ಯೋಜನೆಯನ್ನು ಅನುಷ್ಠಾಣಗೊಳಿಸುವುದರಿಂದ ಪ್ರಸ್ತುತ ಭವಿಷ್ಯದ ಪೀಳಿಗೆಗೆ ಭದ್ರ ಪಡಿಸಿಕೊಳ್ಳಲು ಹಿರಿಯ ಜೀವಿಗಳಿಗೆ ಸುಸ್ತಿರ ಗುರಿಗಳ ಸಾಕ್ಷಾತ್ಕಾರಕ್ಕೆ ಸಹಕಾರಿಯಾಗುತ್ತದೆ. ಸಮಗ್ರ ಮತ್ತು ಗುಣಮಟ್ಟದ ಆರೈಕೆಯನ್ನು ಒದಗಿಸುವುದು ಮತ್ತು ಹಿರಿಯ ನಾಗರಿಕರ ಸುರಕ್ಷಿತ ಸಹಾನೂಬೂತಿ, ಜನ್ಮ ಜಾತ ಪರಿಸರ ಸುತ್ತ ಮುತ್ತಲಿನ ಸಂಭಂದಿಕ ಗೌರವ ಮತ್ತು ಘನತೆಯಿಂದ ಬದುಕುವಂತೆ ನೋಡಿಕೊಳ್ಳುವದು. ಹಿರಿಯ ನಾಗರಿಕರ ಜೀವನದ ಜ್ಞಾನ ಮತ್ತು ಅನುಭವಗಳನ್ನು ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಕಾರ್ಯ ನಿರ್ವಹಿಸುವದು. ಹಿರಿಯ ನಾಗರಿಕರು ಮತ್ತು ಸಮಾಜ ಎರಡಕ್ಕೂ ಅರ್ಥ ಪೂರ್ಣವಾಗಿ ಕೊಡುಗೆ ನೀಡಬಹುದಾಗಿದೆ. ಸಾಮಾಜಿಕ ಹಿರಿಯ ನಾಗರಿಕರ ಸಂಸ್ಥೆಯನ್ನು ಸ್ಥಾಪಿಸುವದು ಹಿರಿಯ ನಾಗರಿಕರನ್ನು ಸಂಹನ ಮಾಡುವದು ಅವರಿಂದ ಆರೋಗ್ಯಕರ ಮತ್ತು ಶಾಂತಿಯುತ ಸಮಾಜದ ಅಗತ್ಯವಿರುವ ಮೌಲ್ಯಗಳನ್ನು ಕಲಿಯುವದು. ಸಾಮಾಜಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಒಡನಾಟ, ಭಾವನಾತ್ಮಕ ಬೆಂಬಲ ಚಿಕಿತ್ಸೆ, ಮನರಂಜನಾ ಸೌಲಭ್ಯಗಳು ಹಾಗೂ ಚಟುವಟಿಕೆಗಳನ್ನು ಒದಗಿಸುವುದು. ದೈನಂದಿನ ಜೀವನದಲ್ಲಿ ಹಿರಿಯ ನಾಗರಿಕರಿಗೆ ಸ್ವಾತಂತ್ರ್ಯವನ್ನು ಒದಗಿಸುವುದು ಮತ್ತು ಜೀವನದ ಉನ್ನತ ಮೌಲ್ಯಗಳನ್ನು ಪುನರಸ್ಥಾಪಿಸುವದು. ಹಿರಿಯರಿಗೆ ಸವಾಲಿನ ಮತ್ತು ನೆಮ್ಮದಿಯ ಅಗತ್ಯವಿರುವ ಆಶ್ರಯವನ್ನು ನಿಗದಿಪಡಿಸುವುದು ಸಕಾರಾತ್ಮಕವಾದ ಉದ್ದೇಶವಾಗಿರುತ್ತದೆ. ವಯಸ್ಸಾದ ಹಿರಿಯರು ತಮ್ಮ ಪ್ರೀತಿ ಪಾತ್ರರು, ಸ್ನೇಹಿತರು ಮತ್ತು ಕುಟುಂಬದವರು ಸಹಭಾಗಿತ್ವದಲ್ಲಿ ತಮ್ಮ ಸಂತೋಷವನ್ನ ಪಡೆಯುತ್ತಾರೆ.
- ವೃದ್ಧಾಶ್ರಮಗಳಲ್ಲಿ ವೃದ್ಧರ ಆರೋಗ್ಯ ಭಾವನಾತ್ಮಕ ಸಂಬಂಧ ಸಧೃಡತೆಯ ಯೋಜನೆ ಮತ್ತು ಗುರಿ ಹೊಂದಿಸುವ ಹಂತಗಳಲ್ಲಿರುವಾಗ ವಯಸ್ಸಾದ ಪ್ರೀತಿ ಪಾತ್ರರು ತಮ್ಮ ಆಸೆ ಬೇಡಿಕೆಗಳನ್ನು ಅನುಭವಿಸಲು ಅವರಿಗೆ ಬೇಕಾದ ಸಂಪನ್ಮೂಲಗಳನ್ನು ಗುರುತಿಸುವುದು ಮುಖ್ಯ . ಭಾರತದಲ್ಲಿ ವಯಸ್ಶದವರ ಜನಸಂಖ್ಯೆಯಲ್ಲಿ ಸ್ಥಿರ ಏರಿಕೆ ಇದೆ. ನಮ್ಮ ಸಾಂಪ್ರದಾಯಿಕ ಮೌಲ್ಯಗಳು ಹಿರಿಯರಿಗೆ ಗೌರವ ಮತ್ತು ಕಾಳಜಿಯನ್ನು ನೀಡುವಲ್ಲಿ ಒತ್ತು ನೀಡುತ್ತವೆ. ವಯಸ್ಸಾದ ವ್ಯಕ್ತಿ ಸಾಕಷ್ಟು ಸಾಮಾಜಿಕ ಭದ್ರತೆಯ ಸಮಸ್ಸೆಗಳನ್ನು ಎದುರಿಸುತ್ತಿದ್ದಾರೆ. ಮುಪ್ಪು ಒಂದು ಪ್ರಮುಖ ಸಾಮಾಜಿಕ ಸವಾಲಾಗಿ ಮಾರ್ಪಟ್ಟಿದೆ. ವೃದ್ಧರ ಆರ್ಥಿಕ ಮತ್ತು ಆರೋಗ್ಯಕರ ಅಗತ್ಯತೆಗಳನ್ನು ಪೂರೈಸುವ ಅವಶ್ಯಕತೆಯಿದೆ.ವಯಸ್ಸಾದವರ ಭಾವನಾತ್ಮಕ ಅಗತ್ಯೆತೆಗಳಿಗೆ ಅನೂಕೂಲಕರವಾದ ಸಾಮಾಜಿಕ ಪರಿಸರವನ್ನು ವೃದ್ಧಾಶ್ರಮಗಳು ರಚಿಸುವ ಮೂಲಕ ಸ್ಪಷ್ಠವಾದ ಗುರಿ ಮತ್ತು ಉದ್ದೇಶವನ್ನು ತಿಳಿಸುತ್ತದೆ..
ಅಭಿಪ್ರಾಯ
ಸಂದರ್ಶಕರ ಅಭಿಪ್ರಾಯ:-
ಶ್ರೀ ನಿಂಗನಗೌಡ ಪಾಟೀಲ ಆದ ನಾವು ಕುಟುಂಬ ಸಮೇತ ದಿನಾಂಕ 10-19-2019 ರಂದು ಸುರಭಿ ವೃದ್ಧಾಶ್ರಮಕ್ಕೆ ಅನರಿಕ್ಷೀತವಾಗಿ ಭೇಟಿ ನೀಡಿದೇವು. ನಮ್ಮ ಮನೆಯಲ್ಲಿ ಒಂದು ಕಾರ್ಯಕ್ರಮವಿತ್ತು ನಮ್ಮ ಮಗುವಿಗೆ ಏನೆಲ್ಲಾ ಹಬ್ಬ ಸಂಭ್ರಮಮಾಡುವ ನಾವು ಕೊನೆಯ ಅವಸ್ಥೆಯಾದ ಮುಪ್ಪಾವಸ್ಥೆಗೆ ಅಷ್ಟೂಂದು ಅಸಡ್ಯ ಏಕೆ? ಅನ್ನುವ ಅಭಿಪ್ರಾಯ ಬಂದಾಗ ಈ ವೃದ್ಧಾಶ್ರಮಕ್ಕೆ ಭೇಟಿಮಾಡಿದೇವು.
ಈ ವೃದ್ಧಾಶ್ರಮಕ್ಕೆ ಬಂದಾಗ ನನಗೆ ಮುಪ್ಪಿನ ಬಗ್ಗೆ ಹಾಗೇನು ಅನಿಸಲಿಲ್ಲಾ ಕಾರಣ ಇಲ್ಲಿನ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗದವರು ಮಾತೃಹೃದಯದಿಂದ ಕೂಡಿದವರ ಇದ್ದು. ಮನೆಯವರಿಗಿಂತಲು ಇಲ್ಲಿ ಚನ್ನಾಗಿ ಪ್ರೀತಿಯಿಂದ ನೋಡಿಕೊಳ್ಳುವ ವಾತಾವರಣ ಖಂಡಿತ ಇದೆ.
ದೇವರು ಎಲ್ಲವನ್ನು ಎಲ್ಲವನ್ನು ಸರಿಯಾಗಿ ಇಟ್ಟಿಲ್ಲ. ಸರಿಯಾಗಿ ಇರುವರು ಸರಿಯಾಗಿ ಇಲ್ಲದವರ ಬಗ್ಗೆ ಚುರೆಚುರು ಮೂಲೆಯಲ್ಲಿ ಪ್ರೀತಿ, ಮಮತೆ, ಸಹಕಾರ, ಅಂತಃಕರಣ ಇದ್ದರು ಸಾಕು ಜಗತು ಸುಂದರವಾಗಿ ಕಾಣಿಸುತ್ತದೆ ಎಂದು ಹೇಳಳು ಬಯಸುತ್ತೇನೆ. ಏಕೆಂದರೆ ಈ ಸುರಭಿ ವೃದ್ಧಾಶ್ರಮದಲ್ಲಿ ಎಲ್ಲರನ್ನು ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಮತ್ತೆ ನಾನು ಭೇಟಿ ನೀಡಲು ಈ ವೃದ್ಧಾಶ್ರಮಕ್ಕೆ ಬರಲು ಹರ್ಷಿಸುತ್ತೇನೆ.
“ಮುಪ್ಪು ತಪ್ಪೆ” ಈ ಮಾತನ್ನು ನನ್ನ ಇಡೀ ಜೀವಮಾನವನ್ನು ಎಚ್ಚರಿಸುವ ಸಂದೇಶವಾಗಿದೆ.
ಶ್ರೀ ನಿಂಗನಗೌಡ ಪಾಟೀಲ
(ಶಿಕ್ಷಕರು)
ಗ್ರಾಮ ಪಂಚಾಯತಿ ಹುಲಕೋಟಿ ಕಾರ್ಯದರ್ಶಿ ಆದ ನಾನು ಸುರಭೀ ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಎಲ್ಲಾ ಹಿರಿಯ ಜೀವಿಗಳನ್ನು ನೋಡಿ ಬಹಳ ಖುಷಿಯಾಯಿತು ಹಾಗೂ ಈ ವೃದ್ಧಾಶ್ರಮವೂ ಎಲ್ಲಾ ರೀತಿಯಿಂದಲೂ ಚನ್ನಾಗಿದೆ ಹಾಗೂ ಅತಿ ಶಿಸ್ತಿನಿಂದ ಕೋಡಿದ ವೃದ್ಧಾಶ್ರಮವಾಗಿದೆ.
* Well Maintained old age Home nice place ಹಾಗೂ ಈ ದಿನ ನನ್ನ ಜೀವನದಲ್ಲಿ ಸುಂದರವಾದ ದಿನಯಂದು ತಿಳಿಯುತ್ತೇನೆ ಮತ್ತು ಇಲ್ಲಿಯ ವಯೋವೃದ್ಧರು ಇವರ ಆರೋಗ್ಯ ಆಯುಷ ಚನ್ನಾಗಿ ಇರಲು ಆ ದೇವರನ್ನು ಕೇಳಿಕೊಳ್ಳುತ್ತೇನೆ.
ಗ್ರಾಮ ಪಂಚಾಯತಿ ಕಾರ್ಯದರ್ಶಿ
ಸಮುದಾಯದ ಅಭಿಪ್ರಾಯ:-
ಶ್ರೀ ಮನೋಹರಗೌಡ ಪಾಟೀಲ ಗ್ರಾಮ ಪಂಚಾಯತಿ ಸಧ್ಯಸರಾದ ನಾನು ಸುರಭಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿಯ ವಾತಾವರಣ ನನಗೆ ಬಹಳ ಇಷ್ಟಯಾಯಿತು ಮತ್ತು ಅಲ್ಲಿಯೇ ವಯೋ ವೃದ್ಧರನ್ನು ಪ್ರೀತಿ ಕಾಳಜಿ ಅತ್ಯುತಮ್ಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಇಲ್ಲೆ ಸಿಬಂದಿ ವರ್ಗವರು ಎಲ್ಲಾ ವೃದ್ದರನ್ನು ಸ್ವಚ್ಚತೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡಿರುತ್ತಾರೆ. ಇಲ್ಲಿಯ ವಯೋವೃದ್ಧರನ್ನು ನೋಡಿ ನಮ್ಮ ಹುಲಕೋಟಿ ಗ್ರಾಮದಲ್ಲಿ ಇಂತಹ ವೃದ್ಧಾಶ್ರಮ ಇದೇಯಲ್ಲಾ ಎಂದು ಖುಷಿಯಾಯಿತು. ಇವರಿಗೆ ಆ ದೇವರು ಚನ್ನಾಗಿ ನೋಡಿಕೊಳ್ಳುವ ಶಕ್ತಿಯನ್ನು ಕೋಡಲೆಂದು ಹರ್ಷಿಸುತ್ತೇನೆ.
ಶ್ರೀ ಮನೋಹರಗೌಡ ಪಾಟೀಲ
(ಗ್ರಾಮ ಪಂಚಾಯತಿ ಸಧ್ಯಸರು)
ಶ್ರೀ ಸುರೇಶ ಮುಕನ್ನವರ ಆದನಾನು ಸುರಭಿ ವೃದ್ಧಾಶ್ರಮದ ಎಲ್ಲಾ ಹಿರಿಯ ಜೀವಿಗಳಿಗೆ ಹಾಗೂ ಇಲ್ಲಿನ ಸಿಬ್ಬಂದಿ ವರ್ಗದವರಿಗೆ ನನ್ನ ಆನಂತ ವಂದನೆಗಳು ವೃದ್ಧಾಶ್ರಮದಲ್ಲಿ ಇರುವಂತ ಎಲ್ಲಾ ವಯೋವೃದ್ದರೊಂದಿಗೆ ಮಾತನಾಡಿದಾಗ ನನಗೆ ಹಾಗೂ ನನ್ನ ಕುಟುಂಬದವರಿಗೆ ಆನಂದವಾಯಿತು. ಅದರ ಜೋತೆಗೆ ದುಖಃವಾಯಿತು ಏಕೆಂದರೆ ಈಗ ಇರುವಂತಹ ಅವರ ವಯೋವೃದ್ಧರ ಸ್ಥಿತಿಗೆ ಆಸರೆಯಾಗಿ ಇರಬೇಕಾದಂತಹ ಮಕ್ಕಳು ಹಾಗೂ ಸಂಬಂದಿಕರು ಅವರನ್ನು ನೀಡಿಕೊಳ್ಳದೆ ಇರುವುದೇ ನನಗೆ ಬೇಜಾರವಾಯಿತು. ಮೇಲಾಗಿ ಮಾತ್ರು ಪಿತ್ರು ದೇವೂಭವ ಎಂದು ತಂದೆ ತಾಯಿಯನ್ನು ಎಂದಿಗೂ ಕೈ ಬೀಡಬಾರದೆಂದು ಒಂದು ಸಂಗತಿ ತಿಳಿದು ಬಹಳ ನೂವಾಯಿತು ಅದೇ ರೀತಿ ಸಿಬಂದ್ಧಿ ವರ್ಗವು ವೃದ್ಧರನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುವ ರೀತಿ ನೋಡಿ ಸಂತೋಷವಾಯಿತು. ಹಾಗೂ ವೃದ್ಧಾಶ್ರಮದಲ್ಲಿ ಇರುವಂತಹ ವಯೋವೃದ್ಧರಿಗೆ ಒಳ್ಳೆಯ ಶಕ್ತಿ ಹಾಗೂ ಆರೋಗ್ಯ ಭಗ್ಯಾ ನೀಡಲಿ ಎಂದು ಆ ಭಗವಂತನಲ್ಲಿ ಬೇಡಿಕೊಳ್ಳೋತ್ತೇನೆ.
ಸುರೇಶ ಮುಕನ್ನವರ
(ಆಟೋ ಚಾಲಕರು)
ಫಲಾನುಭವಿಯ ಅಭಿಪ್ರಾಯ :-
ವೆಂಕಟಕೃಷ್ಣ ರಡ್ಡಿ ಆದ ನಾನು ಸುರಭಿ ವೃದ್ಧಾಶ್ರಮದ ಫಲಾನುಭವಿಯಾಗಿ ಒಂದು ವರ್ಷ ವೃದ್ಧಾಶ್ರಮದಲ್ಲಿ ಕಾಲ ಕಳದೆ. ನನಗೆ ನನ್ನ ಮನೆಯಲ್ಲಿ ನೋಡಿಕೊಳ್ಳಲು ಯಾರು ಇದ್ದಿಲ್ಲ. ಹಾಗೆ ಒಂದು ದಿನ ಒಬ್ಬ ಅಪರಿಚಿತ ವ್ಯಕ್ತಿ ಸುರಬಿ ವೃದ್ಧಾಶ್ರಮದ ಬಗ್ಗೆ ಹೇಳಿ ಕಳಸಿದರು. ವೃದ್ಧಾಶ್ರಮದಲ್ಲಿ ಇರುವರಿಗೂ ವೃದ್ಧಾಶ್ರಮದ ಎಲ್ಲಾ ಸಿಬ್ಬಂದಿ ವರ್ಗದವರು ನನ್ನನ್ನು ತಮ್ಮ ತಂದೆಯಂತೆ ಅಥವಾ ತಮ್ಮ ಮನೆಯ ಹಿರಿಯ ಜೀವಿಯಂತೆ ನನ್ನನ್ನು ನೋಡಿಕೊಂಡಿರುತ್ತಾಗೆ ನನಗೆ ಅನುಪಸ್ಥಿತಿ ಬಂದಾಗ ಒಂದು ಸುವ್ಯವಸ್ಥೆಯನ್ನು ಮಾಡಿಕೊಟ್ಟಿರುತ್ತಾರೆ. ಇವರಿಗೆ ತುಂಬ ಹೃದಯವಾದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸುರಭಿ ಎಂಬ ಸಂಸ್ಥೆಯನ್ನು ನನ್ನ ಇಡಿ ಜೀವಮಾನ ಇರುವರೆಗೂ ಎಂದಿಗೂ ಮರೆಯುದಿಲ್ಲ.
ವೆಂಕಟಕೃಷ್ಣ ರಡ್ಡಿ
(ವೃದ್ಧಾಶ್ರಮದ ಫಲಾನುಭವಿ)
ಶ್ರೀಮತಿ ನೀಲವ್ವ ಶಿರಹಟ್ಟಿ ಕಾರವಾರ ಆದನಾನು ಮನೆಯಲ್ಲಿ ಗಂಡ ಮಕ್ಕಳು ಕುಟುಂಬದವರೊಡನೆ ಕಲಹ ಉಂಟಾಗಿ ಮನೆಯಲ್ಲಿ ಇರಲು ಜಾಗವಿಲ್ಲದೇ ಹೇಗೆ ಎಂದು ವಿಚಾರ ಮಾಡುತ್ತಾ ಕುಳಿತಾಗ ನನ್ನ ಸ್ನೇಹಿತೆ ನನ್ನನ್ನು ಕರೆದುಕೊಂಡು ಹಿರಿಯ ನಾಗರಿಕರ ಸಹಯವಾಣಿ ಕೇಂದ್ರಕ್ಕೆ ಹೊದೆಯೋ ಅಲ್ಲಿ ನನ್ನ ದುಖಃವನ್ನು ಎಲ್ಲಾ ಹೇಳಕೊಂಡೆ ನನಗು ಇರಲು ಜಗವಿಲ್ಲ, ಯಾವದಾದರೂ ಆಶ್ರಮಕ್ಕೆ ಕಳೆಸಿಕೊಡಿಯಂದೆ ಆಗ ಅವರು ಸುರಭಿ ವೃದ್ಧಾಶ್ರಮ ಹುಲಕೋಟಿಯಲ್ಲಿ ವಯೋ ವೃದ್ಧರಿಗೆ ಇರಲು ವ್ಯವಸ್ಥೆ ಇದೆ ಎಂದು ಕಳಿಸಿದರು. ನಾನು ಏನು ತಿಳಿಯದೆ ವೃದ್ಧಾಶ್ರಮಕ್ಕೆ ಬಂದೆ ನನ್ನ ಕಷ್ಟವನ್ನು ಇವರ ಮುಂದೆ ಹೇಳಿಕೊಂಡೆ ಇಲ್ಲಿ ಎಲ್ಲಾ ವೃದ್ಧರನ್ನು ತಮ್ಮ ತಂದೆ ತಾಯಿಯಂತೆ ನೋಡಿಕೊಳ್ಳುತ್ತಾರೆ. ಯಾರಿಗೆ ಏನೇ ಸಮಸ್ಯೆಯಾದರು ಸ್ಪಂದನೆ ಮಾಡುತ್ತಾರೆ. ನನ್ನನ್ನು ತಮ್ಮ ಸಂಬಂದಿಕರಂತೆ ನೋಡಿಕೊಂಡರು. ನನಗೆ ಕುಟುಂಬದವರನೇ ಕಲಹ ಬಂದಾಗ ಅವರನ್ನು ಕರೆಸಿ ಅವರ ಜೋತೆ ಮಾತನಾಡಿ ನನ್ನ ಸಮಸ್ಯೆಯನ್ನು ಬಗಿಹರಿಸಿದರು. ಮತ್ತೆ ಕುಟುಂಬದವರ ಜೋತೆ ಒಂದು ಮಾಡಿ ಕಳೆಸಿಕೊಟ್ಟರು ಇಲ್ಲಿಯ ಎಲ್ಲಾ ಸಿಬ್ಭಂದಿ ವರ್ಗದವರಿಗೆ ಗೌರವ ಪೂರ್ವಕವಾಗಿ ಅಭಿನಂದನೆಗಳನ್ನು ಅರ್ಪಿಸುತ್ತೇನೆ. ನಾನು ಮತ್ತು ನನ್ನ ಕುಟುಂಬ ಸುರಭಿ ಸಂಸ್ಥೆಯನ್ನು ಮರೆಯುವದಿಲ್ಲ ಏಕೆಂದರೆ ಎಲ್ಲಾ ಹಿರಿಯ ಜೀವಿಗಳಿಗೆ ಯಾರು ನೋಡಿಕೊಳ್ಳದೆ ಇದ್ದರು ಸುರಭಿ ಸಂಸ್ಥೆ ಅಂತವರಿಗೆ ಊರು ಗೂಲಾಗಿ ನಿಂತಿವೆ.
ಶ್ರೀಮತಿ ನೀಲವ್ವ ಶಿರಹಟ್ಟಿ
(ಸುರಭಿ ವೃದ್ಧಾಶ್ರಮದ ವಯೋವೃದ್ದೇ)
ಯಶಸ್ವಿ ಯಶೋಗಾಧೆಗಳು
ರತ್ನಾಬಾಯಿ ಬಾಲಕೃಷ್ಣ ವಲಭಂಜನ
ಇವರು ದಿನಾಂಕ 24/08/2016ರಂದು ಕಾರವಾರ ಜಿಲ್ಲೆಯ ಸುರಭಿ ವೃದ್ದಾಶ್ರಮಕ್ಕೆ ಫಲಾನುಭವಿಯಾಗಿ ದಾಖಲೆ ಮಾಡಿಕೊಳ್ಳಲಾಗುತ್ತದೆ. ರತ್ನಾಬಾಯಿ ವಲಭಂಜನ ವೃದ್ದೆಯು ಮೂಲತಹ ಹುಬ್ಬಳ್ಳಿಯವರಾಗಿರುತ್ತಾರೆ, ಇವರು 80 ವರ್ಷ ವಯೋಮಿತಿಯವರಾಗಿದ್ದು ಹುಬ್ಬಳ್ಳಿಯ ಆನಂದ ನಗರದಲ್ಲಿ 01/06/1947 ರಂದು ಜನನವಾಯಿತು ತಂದೆ ಶ್ರೀಧರಸಾ ವಲಭಂಜನ ತಾಯಿ-ವತ್ಸಲಾದೇವಿ ವಲಭಂಜನ ತುಂಬು ಅವಿಭಕ್ತ ಕುಟುಂಬದಲ್ಲಿ ಕ್ಷತ್ರಿಯ/ಪಟೆಗಾರ ಮನೆತನದಿಂದ ಬೆಳೆದು ಬಂದರು ಪ್ರೀತಿ ಅನ್ಯೋತೆಯಿಂದ ಬಾಲ್ಯವನ್ನು ಕಳೆದಿದ್ದಾರೆ.
ಮದ್ಯಮ ವರ್ಗದ ಕುಟುಂಬದಲ್ಲಿ ಬಂದ ಇವರ ತಂದೆ ಶ್ರೀಧರಸಾರವರು ಸಣ್ಣಉದ್ದಿಮೆಯನ್ನು ಉಪ ಜೀವನಕ್ಕೆ ಪ್ರಾರಂಭಿಸಿದರು. ಮನೆಯ ಜೀವನಕ್ಕೆ ಉದ್ದಿಮೆಯೆ ಆಧಾರವಾಗಿತ್ತು. ತಾಯಿಯವರು ಮನೆ ಗೃಹಣೆಯಾಗಿದ್ದರು.ಕಾರಣಾಂತರಗಳಿಂದ ರತ್ನ ಬಾಯಿಯವರು ಪ್ರಾಥಮಿಕ ಶಿಕ್ಷಣವನ್ನು ಪಡೆಯದೆ ಕಲಿಕೆ ಶಿಕ್ಷಣದಿಂದ ವಂಚಿತರಾದರು. ಶಾಲೆಯಿಂದ ದೂರವಾದರ ತಂದೆಯವರು ದಿನಂಪ್ರತಿ ವ್ಯಾಪಾರದಲ್ಲಿ ಮಗ್ನನರಾಗಿರುತ್ತಿದ್ದರು ತಾಯಿ ಜೊತೆಗೆ ಸಂತೋಷದಿಂದ ತಮ್ಮ ಬಾಲ್ಯವನ್ನು ಮುಗಿಸಿದರು. ರತ್ನಬಾಯಿಯವರು ಓರ್ವ ಅಕ್ಕನೊಂದಿಗೆ ತುಂಟಾದ ಅನನ್ಯ ಪ್ರೀತಿ ಹೊಂದಾಣಿಕೆಯಿಂದ ಕಾಲ ಕಳೆದಿದ್ದರು.
ಇವರ 18ನೇ ವಯಸ್ಸಿನಲ್ಲಿ ಇವರ ತಂದೆ ಅನಾರೋಗ್ಯದಿಂದ ದೂರವಾದರು.ಕಾರಣ ಇಹಲೋಕಮುಗಿಸಿದರು.ಇದು ಇವರ ಕುಟುಂಬಕ್ಕೆ ತುಂಬಲಾರದ ನೋವು,ಕಷ್ಟಗಳನ್ನುಎದುರಿಸಿದರು.ಎಲ್ಲಜವಾಬ್ದಾರಿ ತಾಯಿಯೆ ವಹಿಸಿದರು. ರತ್ನಾಬಾಯಿ ಬಾಲಕೃಷ್ಣ ವಲಭಂಜನ 25 ನೇಯ ವಯಸ್ಸಿನಲ್ಲಿ ಬಾಲ ಬಾಲಕೃಷ್ಣ ಎಂಬುವರ ಜೊತೆಗೆ ದಾಪಂತ್ಯ ಪ್ರಾರಂಭಿಸಿದರು ಸುಖಿ ದಾಂಪತ್ಯದೊಂದಿಗೆ ಜೀವನಕ್ಕಾಗಿ ಉದ್ಯಮೆ/ವ್ಯಾಪಾರವನ್ನು ಪ್ರಾರಂಭ ಮಾಡಿದರು ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಮೊದಲು ವ್ಯಾಪಾರವು ತುಂಬಾ ಚೆನ್ನಾಗಿ ಸಾಗಿತ್ತು.ಇವರ ದಾಂಪತ್ಯ ಇವರಿಗೆ 4ಮಕ್ಕಳು ಜನಿಸಿದರು 2ಹೆಣ್ಣು- 2ಗಂಡು ಮಕ್ಕಳನ್ನು ಪಡೆದರು.ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಸ್ವಂತದಾದಚಿಕ್ಕದಾದ ಮನೆಯೊಂದನ್ನು ಮಾಡಿಕೊಂಡರು ನಂತರದ ಜೀವನದಲ್ಲಿ ಪ್ರಗತಿ ಕಾಣುವಾಗ ಮನೆಯಿಂದ ದೂರವಾದರು, ಅನಾರೋಗ್ಯದಿಂದಿದ ವಯಸ್ಸಾಗಿ ಮರಣ ಹೊಂದಿದರು. ಇದರಿಂದ ಜೀವನದಲ್ಲಿ ತುಂಬಾ ಕಷ್ಟಗಳಿಂದ ಜೀವನೋಪಾಯ ಅವನತಿ ಸಾಗುತಾ ಬಂದಿತು.ವಿಧಿ ಎಷ್ಟೂ ಕೆಟ್ಟದೆಂದರೆ ಅನಾರೋಗ್ಯದಿಂದ ಗಂಡು ಮಕ್ಕಳು ಮರಣ ಹೊಂದಿದರು. ಮಾನಸ್ಸಿಕಾಗಿ ನೊಂದರು ಅನಾರೋಗ್ಯದಲ್ಲಿ ಅಸ್ಥವ್ಯಸ್ತರಾದರು ಮರಣದ ಜೀವನ ಮುಂದುವರೆಸಿದರು.
ಮುಂದೆ ತೊಂದರೆಗಳಿದ್ದರು ಸ್ವಾವಲಂಬಿಯಾಗಿ ಬೇರೆ ಬೇರೆ ಮನೆಗೆ ಹೋಗಿ ಸಾಧ್ಯವಾದಷ್ಟು ಮನೆಗೆಲಸ ಮಾಡಿ ಮಕ್ಕಳನ್ನು ಬೆಳಸಿದರು.ವಯಸ್ಸಿಗೆ ಬಂದ ಮಗಳನ್ನು ಆಡಂಬರದ ವಿಲ್ಲವೆ ಅಚ್ಚು ಕಟ್ಟಾಗಿ ಒಳ್ಳೆಯ ತಮ್ಮ ಮನೆತನದಲ್ಲಿ ವರವನ್ನು ಹುಡುಕಿ ಮಗಳಿಗೆ ಮದುವೆ ಮಾಡಿದರು.ನಂತರದ ಏಕಾಂಗಿ ಕಷ್ಷದಜೀವನ ಸಾಗಿಸುವಾಗ ಎಷ್ಟು ಕಷ್ಟವೆಂರೆ ಅವರಿಗೆ ಪಾರ್ಶ್ಯವಾಯು ಅನಾರೋಗ್ಯಕ್ಕೆ ಒಳಗಾದರು. ಇದು ಅವರಿಗೆ ಮತ್ತಷ್ಟು ತೊಂದರೆ ಉಂಟು ಮಾಡಿತ್ತು ಇದರಿಂದ ವ್ರದ್ಯಾಪ ವೇತನ ಮಾಡಿಕೊಂಡರು. ಮುದೆ ಇವರ ಅಕ್ಕ ವೃದ್ದಾಶ್ರಮಕ್ಕೆ ಸೇರಿಸಿದರು ಇಲ್ಲಿ 5 ವರ್ಷಗಳ ಕಾಲ ನೆಮ್ಮದಿ ಸಂತೋಷದಿಂದ ಇರಲು ಇಲ್ಲಿಯೆ ಅವರು ಮಗಳ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದರು. ಅವರ ಸಂಬದಿಕರ ಮನವೊಲಿಸಿ ಮತ್ತೆ ಅವರ ಕುಟುಂಬ ಪುನರ್ ವಿಲನಗೊಳಿಸಿ ಅಜ್ಜಿಯು ಮನೆಯಲ್ಲಿ ಕುಟುದೊಂದಿಗೆ ಸೇರಿಸಿ ಸುಖಾಂತ್ಯಗೊಳಿಸಿದರು.
ಮಂಜುನಾಥಸ್ವಾಮಿ ಜಯದೇವ ಹನಗೊಂದಿಮಠ
ಅಂಬಸಾ ಲಕ್ಷ್ಮಣಸಾ ಕಾಟವೆ ಇವರು 05/06/2015 ರಂದು ಕಾರವಾರ ಜಿಲ್ಲೆಯ ಸುರಭಿ ವೃದ್ದಾಶ್ರಮಕ್ಕೆ ಫಲಾನುಭವಿಯಾಗಿ ದಾಖಲೆ ಮಾಡಿಕೊಳ್ಳಲಾಗುತ್ತದೆ. ಮಂಜುನಾಥಸ್ವಾಮಿ ಜಯದೇವ ಹನಗೊಂದಿಮಠ ವೃದ್ದರು ಹುಬ್ಬಳ್ಳಿಯಿಂದ ಬಂದವರು ಇವರಿಗೆ 76 ವರ್ಷ ವಯೋಮಿತಿ ಹೊಂದಿದ್ದಾರೆ.. ತಂದೆ - ಲಕ್ಷ್ಮಣಸಾ ಕಾಟವೆ ತಾಯಿ – ಲಕ್ಷ್ಮಿಬಾಯಿ ಇವರ ತಂದೆ-ತಾಯಿಯರಿಗೆ ಒಟ್ಟು 5 ಜನ ಮಕ್ಕಳು ಮಂಜುನಾಥಸ್ವಾಮಿ ಜಯದೇವ ಹನಗೊಂದಿಮಠ ಇವರು 2ನೇ ಹಿರಿಯ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಇವರ ಕುಂಟುಂಬವು ಸಾಧರಣ ಮಧ್ಯಮ ವರ್ಗದಿಂದ ಕೂಡಿತ್ತು ಚಿಕ್ಕ ಅಂಗಡಿಯ ಮೂಲಕ ಅಂದರೆ ಸಿಹಿ ಪದಾರ್ಥಗಳ ವ್ಯಾಪಾರ ನೆಡೆಸುತ್ತಾ ಜೀವನ ಸಾಗಿಸುತ್ತಿದ್ದರು. ತಾಯಿ ಮನೆಗೆಲಸ ಮಾಡುತ್ತ 5 ಮಕ್ಕಳನ್ನು ಆರೈಕೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.
ಬಾಲ್ಯದಲ್ಲಿ ಇವರಿಗೆ ಕುಟುಂಬದ ಅತಿಯಾದ ಬಡತನದಿಂದ ಯಾವುದೆ ಶಾಲೆಗೆ ಹೋಗದೆ ಶಿಕ್ಷಣದಿಂದ ವಂಚಿತರಾದರು ಮನೆಯಲ್ಲಿ ಉಳಿದ ಸಹೋರರೋಡನೆ ಆಟವಾಡುತ್ತಾ ಸಂತೋಷದಿಂದ ಕಾಲ ಕಳೆದಿದ್ದರು.ಮನೆಯಲ್ಲಿ ತಂದೆಯ ವ್ಯಾಪಾರ ಜೊತೆಗೆ ಅವರೊಂದಿಗೆ ಸಹಾಯ ಮಾಡುತ್ತಾ ಬೆಳೆದು ದೊಡ್ಡವರಾದರು. ನಂತರ 16ನೇ ವಯಸ್ಸಿಗೆ ಮನೆಯಿಂದ ಹೊರಬಂದರು ಹೊಟ್ಟೆಪಾಡಿಗಾಗಿ, ಬಡತನದಿಂದ ಸ್ವಿಚ್ಚೆಯಿಂದ ಮನೆಯನ್ನು ಬಿಟ್ಟರು ಅಲ್ಲಿಂದ ಕರ್ನೂಲ ಸ್ಥಳಕ್ಕೆ ಬಂದರು ಎಂದು ತಿಳಿಸಿದ್ದಾರೆ ಅಲ್ಲಿ ಸಂಬಂದಿಕರ ಪರಿಚಯ ಮೂಲಕ ಉಳಿದರು ಉಡುಪಿಯ ಉಪಹಾರ ಮಂದಿರದಲ್ಲಿ ಸೇವಕರಾಗಿ ಕೆಲಸವನ್ನು ಆರಂಭಿಸಿದರು 1960ರಲ್ಲಿ ಹೊಸ ಜೀವನ ಪ್ರಾರಂಭಮಾಡಿದರು.
ಹೋಟೆಲ ವಸತಿ ಗೃಹದಲ್ಲಿ ಉಳಿದುಕೊಂಡು ಜೀವನ ಸಾಗಿಸುತ್ತಿದ್ದರು.ಸುಮಾರು ಕೆಲವು ತಿಂಗಳಗಳ ಮಾತ್ರ ಕಾರ್ಯ ನಿರ್ವಹಿಸಿದರು ಆದರೆ ಬದುಕಿನ ಹೋರಾಟದಲ್ಲಿ ಒಂದೇ ಕಡೆ ಉಳಿಯದೆ ಬೇರೆ ಬೇರೆ ನಗರ ಬೇರೆ ಬೇರೆ ಕೆಲಸಗಳ ಮೂಲಕ ಜೀವನ ಬಂಡಿಯನ್ನು ಸಾಗಿಸಿದರು. 1961 ರಲ್ಲಿ ಇಲ್ಲಿಯು ಕೆಲಸ ಬಿಟ್ಟು ಬೆಂಗಳೂರು ನಗರಕ್ಕೆ ಬಂದರು ಅಲ್ಲಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿ ಸಂಬಳ ಕಡಿಮೆ ಸಿಗುತ್ತಿದ್ದರಿಂದ ಕೆಲಸವನ್ನು ಬಿಟ್ಟು ನೇರವಾಗಿ ಹೈದ್ರಾಬಾದ ಪಟ್ಟಣಕ್ಕೆ ಹೋದರು.ಅಲ್ಲಿನ ಪ್ರತಿಸ್ಠಿತ ಹೋಟೆಲನಲ್ಲಿ ಕೆಲಸಕ್ಕೆ ಸೇರಿ ಒಳ್ಳೆಯ ಸಂಬಳ ಉತ್ತಮ ವಸತಿಯೋಂದಿಗೆ ನೆಮ್ಮದಿಯಿಂದ ಕಾಲ ಕಳೆದರು.ಇದರ ಮಧ್ಯಲದಲ್ಲಿ ಯಾವುದೆ ರೀತಿಯ ಕುಟುಂದಲ್ಲಿ ಸಂಬಂಧವನ್ನು,ಸಂಪರ್ಕವನ್ನು ಹೊಂದದೆ ಜೀವನ ಸಾಗಿಸುತಿದ್ದರು. ತದನಂತರ ಅಲ್ಲಿಯು ಕೆಲಸ ಬಿಟ್ಟು 68ನೇ ವಯಸ್ಸಿನಲ್ಲಿ ಸಿಖಂದರಾಬಾದ ಪಟ್ಟಣಕ್ಕೆ ಹೋಗಿ ಕೆಲಸಕ್ಕೆ ಸೇರಿದರು.
ಇವರ ಜೀವನದಲ್ಲಿ ದೈಹಿಕ, ಮಾನಸಿಕವಾಗಿ ಚೆನ್ನಾಗಿದ್ದರು ಕಣ್ಣಿನ ಸಮಸ್ಯಯು ಪದೇ ಪದೇ ಕಂಡುಬರುತಿತ್ತು . ಆದರೂ ಅದನ್ನು ಸಣ್ಣ ಪುಟ್ಟ ಚಿಕಿತ್ಸೆ ಮೂಲಕ ಪರಿಹರಿಸಿಕೊಂಡು ಮುಂದೆ ಹೋಗುತ್ತಿದ್ದರು ಮುಂದೆ 71ನೇ ವಯಸ್ಸಿನಲ್ಲಿ ಕಣ್ಣಗಳ ದೃಷ್ಟಿಯು ಸಂಪೂರ್ಣವಾಗಿ ಕಾಣದೆ ಇರುವುದರಿಂದ ಜೀವನಕ್ಕೆ ದೊಡ್ಡ ತೊಂದರೆಯಾಯಿತು ಎಲ್ಲ ಕೆಲಸದಲ್ಲಿಯು ಬೇರೆಯವರ ಸಹಾಯ ಪಡೆಯುವುದು ಅವಲಂಬನೆಯಾಗುವುದು ಅನಿವಾರ್ಯವಾಯಿತು ಸ್ವಾವಲಂಬನೆಯಿಂದ ಬದುಕು ಸಾಗಿಸುತ್ತಿದ್ದ ಇವರಿಗೆ ಕಣ್ಣುಗಳ ದೃಷ್ಟಿದೋಷವು ದಿಕ್ಕುತೋಚದಂತ್ತಾಗಿ ದೈನಂದಿನ ಕೆಲಸಗಳಿಗೂ ಸಹ ಗಂಭೀರವಾದ ತೊಂದರೆ ಪ್ರಾರಂಭವಾಯಿತು. ಮುಂದೆ ದಾರಿ ಕಾಣದೆ ನನ್ನಿಂದ ಒಂಟಿ ಜೀವನ ತುಂಬಾ ಕಷ್ಟವೆಂದು ಮನಗೊಂಡು ನೇರವಾಗಿ ಹುಬ್ಬಳ್ಳಿ ನಗರಕ್ಕೆ ಬಂದು ಪರಿಚಯದವರ ಮೂಲಕ ಹುಲಕೋಟಿ ಸುರಭಿ ವೃದ್ದಾಶ್ರಮದ ಮೂಲಕ ಮಾಹಿತಿ ಪಡೆದುಕೊಂಡರು. ನೇರವಾಗಿ ಸುರಭಿ ವೃದ್ದಾಶ್ರಮಕ್ಕೆ ಬೇಟಿನೀಡಿ ಮೇಲ್ವಿಚಾರಕರ ಮುಂದೆ ತಮ್ಮ ಜೀವನದ ಹಿನ್ನಲೆಯನ್ನು ವಿವರಿಸಿ ಇನ್ನು ನನಗೆ ಜೀವನ ಸಾಗಿಸಲು ಸಾಧ್ಯೇವಾಗುವುದಿಲ್ಲ ನನ್ನನು ವೃದ್ದಾಶ್ರಮಕ್ಕೆ ಸೇರಿಸಿಕೊಳ್ಳಲು ಅನುಮತಿಯೊಂದಿಗೆ ಪ್ರವೇಶ ಪಡೆದುಕೊಂಡರು. ಪ್ರಸ್ತುತ ಉತ್ತಮವಾದ ದೈಹಿಕ,ಮಾನಸಿಕ ಆರೋಗ್ಯದೊಂದಿಗೆ ಇರುವ ವಯೋವೃದ್ದರೊಂದಿಗೆ ಅನೊನ್ಯ ಭಾಂಧವ್ಯದಿಂದ ನೆಮ್ಮದಿದಾಯಕ ಜೀವನ ಸಾಗಿಸುತ್ತಿದ್ದಾರೆ ಸುರಭಿವೃದ್ದಾಶ್ರಮ ನಮ್ಮ ಬಾಳಿಗೆ ಆಶಾ ಕಿರಣವಾಗಿ ಇದರ ಮುಖ್ಯಸ್ಥರಿಗೆ ಇನ್ನು ಹೆಚ್ಚು ವಯೊವೃದ್ದರ ಪಾಲನೆ, ಪೋಷನೆಯಲ್ಲಿ ಆ ಭಗವಂತ ಶಕ್ತಿಯನ್ನು ಕರುಣಿಸಲಿ.
